ಅಪಾರವಾದದ್ದು ನಿನ್ ಕೃಪೆಯು
ಆಶ್ಚರ್ಯವಾದದ್ದು ನಿನ್ ಪ್ರೀತಿಯು
ಯೇಸುವೆ ನೀನೇತಕ್ಕೆ ನನ್ನಿಷ್ಟು ಪ್ರೀತಿಸಿದ್ದಿ
ಕಾರಣ ತಿಳಿಯೆನು
೧. ನನ್ನ ನೀನು ಧೂಳಿನಿಂದ ಮೇಲಕೆತ್ತಿದ್ದಿ
ನನ್ನ ಕಣ್ಣೀರೆಲ್ಲಾ ಒರಸಿ ಅಪ್ಪಿಕೊಂಡಿದ್ದಿ
ಹೀನವಾದ ನನ್ನ ನೀನು ಪ್ರೀತಿ ಮಾಡಿದ್ದಿ
ಕಾರಣ ತಿಳಿಯೇನು೨. ನೀನೇ ಮೆಚ್ಚುವಂತ ಗುಣ ನನ್ನಲ್ಲಿ ಇಲ್ಲವು
ನೀನು ಹೇಸುವಂಥದ್ದೆಲ್ಲಾ
ನನ್ನಲ್ಲಿ ಇರುವುದು
ಇಂತ ಹೀನವಾದ ನನ್ನನ್ನು ಪ್ರೀತಿ ಮಾಡಿದ್ದಿ
ಕಾರಣ ತಿಳಿಯೇನು
೩. ಜಜ್ಜಿದಂತ ದಂಟಿನoತೆ ನಾನು ಇರಲು
ಆರಿ ಹೋಗುವಂತ ದೀಪದಂತಿರಲು ನನ್ನ ನೀನು ನಂದಿಸದೆ ಕರುಣೆ
ತೋರಿದ್ದಿ ಕಾರಣ ತಿಳಿಯೆನು
೪. ದೀರ್ಘಶಾಂತಿ ಪೂರ್ಣ ಪ್ರೀತಿಯನ್ನು ತೋರಿದ್ದಿ,
ಪ್ರೀತಿ ಕೃಪೆಯಿಂದ ನನ್ನನ್ನು ಶೃಂಗರಿಸಿದ್ದಿ
ನಿನ್ ಮುಂದೆ ಬಿದ್ದು ನಾನು ಆರಾಧಿಸುವೆ ನಿನ್ ಪ್ರೀತಿಸುವೆ