ಅರ್ಪಿಸುವೆ ಪ್ರಭು ಅರ್ಪಿಸುವೆ
ನಿನ್ ಸೇವೆಗೆ ನನ್ ಜೀವಿತವ
ಸ್ವೀಕರಿಸು ಪ್ರೀತಿಯಿಂದ
ಕಾಣಿಕೆಯಾಗಿ ನನ್ನ ಸರ್ವವು
೧. ಸಣ್ಣ ಕಾಣಿಕೆಯಾಗಿ ಪವಿತ್ರಪಡಿಸಿ
ಜೀವಿಸು ಸ್ವಾಮಿ
ನಿನ್ ದಿವ್ಯ ಪಾದದ ಸೇವೆಯಲ್ಲಿ
ನನ್ನ ಸೇರಿಸು ನೀ ಸ್ವಾಮಿ
೨. ಸಕಲ ಜಗತ್ತಿಗೆ ಬೆಳಕಾಗಿ ನನ್ನನ್ನು
ನಿಲ್ಲಿಸು ನೀ ಸ್ವಾಮಿ
ಕರುಣೆ ಪ್ರೇಮ ಸಹನೆಯು ನನ್ನಲ್ಲಿ
ಹೆಚ್ಚಿಸು ಸ್ವಾಮಿ
೩. ಲೋಕಕ್ಕೆ ನಿನ್ನಯ ವಾಕ್ಯವ ಸಾರಲು ನಡಿಸು ನೀ ಸ್ವಾಮಿ
ವಾಕ್ಯದ ಜ್ಞಾನದಿಂ ಆತ್ಮನ ಧೈರ್ಯದಿಂ ನಡಿಸು ನೀ ಸ್ವಾಮಿ