ಅಬ್ರಹಾಮನ ದೇವರೆ ನಿನಗೆ ಆರಾಧನೆ
ಇಸಾಕನ ದೇವರೆ ನಿನಗೆ ಆರಾಧನೆ
ಯಾಕೋಬಿನ ದೇವರೇ ನಿನಗೆ ಆರಾಧನೆ ||೨||
ತಂದೆ ಮಗನಿಗೆ ಪವಿತ್ರಾತ್ಮನಿಗೆ
ನಾ ಮಾಡುವೆ ಆರಾಧನೆ ||೨||
೧. ನಾನು ಸುಖವಾಗಿ ಬಾಳಬೇಕೆಂದು
ನನ್ನನ್ನು ಸೃಷ್ಟಿಮಾಡಿದೆ
ನಾನು ನಿನ್ನ ಸ್ತುತಿಸಬೇಕೆಂದು
ಹೆಸರಿಡಿದು ನೀ ಕರೆದೆ
ಕರುಣಾಮಯನೆ ಓ ಕರುಣಾಮಯನೇ
ಉಸಿರಿರುವ ದಿನವೆಲ್ಲ
ನಾ ಮಾಡುವೆ ಆರಾಧನೆ ... ನಾನು
೨. ಹೃದಯದ ತುಂಬ ನಿನ್ನ ಜ್ಞಾಪಕ
ಅದನ್ನು ಬಿಟ್ಟರೆ ಬೇರೇನಿಲ್ಲಪ್ಪ
ಲೋಕವೆಲ್ಲ ಹುಡುಕಿ ನಾ ಬಂದೆ
ಏಲ್ಲೂ ಸಿಗಲಿಲ್ಲ ನಿನ್ನಂಥ ತಂದೆ
ಕೃಪಾಪೂರ್ಣನೆ ಓ ಕೃಪಾಪೂರ್ಣನೇ
ಬದುಕಿರುವ ದಿನವೆಲ್ಲ
ನಾ ಮಾಡುವೆ ಆರಾಧನೆ ... ನಾನು