ಅಮೂಲ್ಯ ರಕ್ತದಿಂದ ರಕ್ಷಣೆ
ಹೊಂದಿದ ಜನಗಳಿರಾ ಸರ್ವಶಕ್ತನ
ಪ್ರಜೆಗಳಿರಾ ಪರಿಶುದ್ಧರೆಲ್ಲ
ಹಾಡುವೆವು ಘನತೆ ಮಹಿಮಾ ಸ್ತುತಿಗಳನ್ನು ಪರಿಶುದ್ಧರೆಲ್ಲಾ ಹಾಡುವೆವು
೧. ನಮ್ಮ ಯೌವ್ವನ ಜೀವಿತದೊಳ್ಳ್
ಶರೀರದಾಶೆಗೆ ಒಳಗಾಗಿ
ದುಷ್ಟರಾಗಿ ಜೀವಿಸುತ್ತ
ಶಾಂತಿಯಿಲ್ಲದೆ ಇದ್ದೆವು
೨. ನಿತ್ಯ ಸತ್ಯ ದೇವರ
ನಾಮದಲ್ಲಿ ಮೊರೆಯಿಡದೆ
ಸ್ವಂತ ನೀತಿಯಿಂದಲೇ
ದೇವರ ರಾಜ್ಯವ ಕೋರಿದೆವು
೩. ತನ್ನ ರಕ್ತಧಾರೆಯಲ್ಲಿ
ನಮ್ಮಯ ಪಾಪವ ತೊಳೆದನು
ನಮ್ಮ ಕಣ್ಣುಗಳ್ ಬೆಳಗಿಸಿ
ತನ್ನ ಜ್ಞಾನದಿ ತುಂಬಿಸಿದ
೪. ರಕ್ಷಕನ ಸ್ತುತಿಸುವೆನು
ಧನ್ಯರಾಗಿ ಮಾಡಿದನು
ನಮ್ಮ ದೇವರಿಗರ್ಪಿಸುವ
ಆತ್ಮ ಪ್ರಾಣ ದೇಹವನ್ನು