ಅಮೂಲ್ಯವಾದ ಕಾಣಿಕೆ
ತನ್ನಿರಿ ಯೆಹೋವನ ಸನ್ನಿಧಿಯಲ್ಲಿ
ಆತನ್ ಪಾದಕ್ಕೆ ಅಡ್ಡ ಬಿದ್ದು
ಸ್ತೋತ್ರ ಮಾಡಿ ಸ್ತೋತ್ರ ಮಾಡಿ
ಸಮರ್ಪಿಸೋಣ ಕಾಣಿಕೆ
ಕಾಣಿಕೆ ಕಾಣಿಕೆ ಆಶೀರ್ವದಿಸು ನಮ್ಮ ಕಾಣಿಕೆ ಕಾಣಿಕೆ ಕಾಣಿಕೆ
ಸ್ವೀಕರಿಸು ನಮ್ಮ ಕಾಣಿಕೆ ಅಮೂಲ್ಯವಾದ ಕಾಣಿಕೆ
೧. ಹತ್ತರಲ್ಲಿ ಒಂದು ಪಾಲನ್ನು
ಅಬ್ರಹಾಮನು ದೇವರಿಗೆ ಕೊಟ್ಟನು
ಹಾಲು ಜೇನು ಹರಿಯುವ ದೇಶವ
ತನ್ ಸಂತತಿಗೆ ಕೊಟ್ಟನು
೨. ಬೆಳೆಯ ಪ್ರಥಮ ಫಲದಿಂದ
ಯೆಹೋವನನ್ನು ಸನ್ಮಾನಿಸು
ನಿನ್ನ ಪೈರು ಸಮೃದ್ಧಿ ಮಾಡಿ
ನುಂಗುವ ಹುಳದಿಂದ ತಪ್ಪಿಸುವನು
೩. ದೇವರ ಆಜ್ಞೆ ಕೈಕೊಳ್ಳುವವರೆ
ಆತನು ಹಿಂಬಲ ಮುಂಬಲವಾಗುವನು
ಪರಲೋಕ ತೆರೆದು ಸುವರವ ಸುರಿಸಿ
ನಿನ್ ಕಣಜವ ತುಂಬಿಸುವನು