ಅತ್ಯಂತ ಪ್ರಿಯ ಯೇಸು
ನಿನ್ನಾಮ ಕೊಂಡಾಡುವೆ
ನನ್ನೆಷ್ಟಾಗಿ ಪ್ರೀತಿಸಿದ್ದೀ
ನಿನ್ನನ್ನೇ ಸೇವಿಸುವೆ
೧. ದೇವಾದಿ ದೇವನಾಗಿ ಸರ್ವ
ವೈಭವದೊಳ್ ವಾಸಿಸಿದಿ
ದೇವದೂತರು ಕೊಂಡಾಡಿದಾಗ್ಯೂ
ನಂಗಾಗಿ ತ್ಯಜಿಸಿಬಂದಿ
೨. ಮಾನವ ರೂಪವ ತಾಳಿ
ಕಷ್ಟ ಸಂಕಟ ಹಿಂಸೆಯನು
ಎಷ್ಟಾಗಿ ಹಸಿದು ಬಾಯಾರಿ
ನಂಗಾಗಿ ತಾಳಿಕೊಂಡಿ
೩. ಕ್ರೂಜೆಯ ಮೇಲೆ ನನಗಾಗಿ
ಸ್ವಪ್ರಾಣವನರ್ಪಿಸಿದೀ
ಕಡು ಪಾಪಿ ನಾನಾಗಿದ್ದಾಗ್ಯೂ
ನನ್ನನ್ನು ಪ್ರೀತಿಸಿದೀ
೪. ಕ್ರೂರ ಹಿಂಸೆಯಿoದಾಗಿ
ಸತ್ತು ಸಮಾಧಿ ಸೇರಿದಿ ನೀ
ಜಯವೀರನಾಗಿ ಎದ್ದು ಬಂದು
ನನ್ನನ್ನು ರಕ್ಷಿಸಿದಿ