ಆಕಾಶ ಪ್ರಕಾಶಿಸಲಿ ಭೂಲೋಕವು ಕೀರ್ತಿಸಲಿ
ನನ್ನ ಯೇಸು ಬರುವ ಸಮಯ ಹಗಲು ಇರುಳು ಸ್ತುತಿಸಿ
ನಾನೆಂದಿಗೂ ಹಾಡುವೆನು
೧. ಕರುಕಟ್ಟಿದ ಕೊಟ್ಟಿಗೆಯೊಳು
ಯೇಸು ರಾಜನು ಜನಿಸಿದನು
ಆತ ನೋಡುವನು ನನ್ನ ರಕ್ಷಿಸಿದನು
ನನ್ನ ಪಾಪವ ತೊಳೆಯಲು ಜನಿಸಿದನು
೨. ಇಂಥಾ ಪ್ರೀತಿಯ ಕಾಣಿಕೆಗೆ
ಬದಲೇನು ಕೊಡುವೆನು ನಾ
ದುರ್ಮಾರ್ಗವನ್ನು ಬಿಟ್ಟು ಆತನನ್ನು
ಹಿಂಬಾಲಿಸಿ ಆತನ ಪಡೆಯೋಣ