ಆತ್ಮದ ಕತ್ತಿಯನ್ನು ಹಿಡಿದುಕೊಳ್ಳುವ

ಆತ್ಮದ ಕತ್ತಿಯನ್ನು ಹಿಡಿದುಕೊಳ್ಳುವ
ಸತ್ಯವೆಂಬ ನಡುಕಟ್ಟು ಕಟ್ಟಿಕೊಳ್ಳುವ
ದುರಾತ್ಮನ ಸೈನ್ಯದೊಡನೆ
ಯುದ್ಧಮಾಡುವಾ ದೇವವಾಕ್ಯ
ಬಲದಿಂದ ಜಯಹೊಂದುವ

೧. ದೇವರು ತನ್ನ ಎಲ್ಲಾ ವೈಭವಕ್ಕಿಂತ
ತನ್ನ ಪರಿಶುದ್ಧ ವಾಕ್ಯ ಮಹಿಮೆ
ಪಡಿಸಿದ ಆಕಾಶ ಭೂಮಿಯು
ಅಳಿದುಹೋದರೂ
ವಾಕ್ಯಗಳು ಅಳಿದು
ಹೋಗುವುದಿಲ್ಲ ಎಂದಿಗೂ

೨. ಬುದ್ಧಿಹೀನಗೆ ವಿವೇಕ ಪ್ರದವಾಗಿದೆ
ಬಂಗಾರಕ್ಕಿoತಲೂ ಶ್ರೇಷ್ಠವಾದದ್ದು
ಶೋಧಿಸಿದ ಜೇನಿಗಿಂತ ಮಧುರವಾದದ್ದು
ಕಣ್ಣುಗಳನ್ನು ಕಳೆಗೊಳಿಸುವಂಥದ್ದು

೩. ಆತ್ಮನ ಅನುಗ್ರಹದಿ ಬರೆಯಲ್ಪಟ್ಟದ್ದು
ಆತ್ಮವನ್ನು ಉಜ್ಜೀವಿಸ ಮಾಡುವಂತದು
ಆದಿಯಲ್ಲಿ ದೇವರು ತನ್ನ ವಾಕ್ಯದಿಂದಲೆ ಅದ್ಭುತ ಲೋಕವನ್ನು ಸೃಷ್ಟಿಸಿದನು
೪. ಯೌವ್ವನಸ್ಥ ತನ್ನ ಮಾರ್ಗ ಶುದ್ಧ
ಮಾಡಲೂ ವಾಕ್ಯ ಹೊರತು ಬೇರೆ
ಒಂದು ಮಾರ್ಗವೂ ಇಲ್ಲ
ನಿನ್ನ ವಾಕ್ಯ ಹೃದಯಲ್ಲಿ ಇಟ್ಟುಕೊಂಡರೆ ನಿನ್ನ ವಿರೋಧವಾಗಿ ಪಾಪ ಮಾಡದಿರನು