ಆಧಾರ ನೀ ಬೇಕಯ್ಯಾ

ಆಧಾರ ನೀ ಬೇಕಯ್ಯಾ (೨)
ಎನ್ ಬಾಳ ಬೆಳಗಿ ಬೆಳಕಾಗಿ ಇರಲು
ಆಧಾರ ನೀ ಬೇಕಯ್ಯಾ

೧. ಮತಿಹೀನನಾಗಿ ನಿನ್
ಮರೆತು ದೇವಾ
ದೂರಕ್ಕೆ ಹೋಗದ ಹಾಗೆ
ನಿನ್ನಾತ್ಮ ಹೊಂದಿ ಬಾಳಲು ಎನಗೆ
ಬಲವನ್ನು ನೀ ನೀಡಯ್ಯ

೨. ಕಷ್ಟದ ಕಡಲಲ್ಲಿ ಮುಳುಗಿ ದೇವಾ
ತೀರದ ಭಯದಲ್ಲಿ ಇರಲು
ಅಭಯವ ನೀಡಿ ದಾರಿಯ ತೋರಲು ಹತ್ತಿರಕೆ ನೀ ಬಾರಯ್ಯ

೩. ಎನ್ ಪ್ರಾಣ ಪ್ರಿಯನೇ
ಯೇಸು ನಿನ್
ರಕ್ಷಣೆ ನಿತ್ಯವು ಎನಗೆ
ತಪ್ಪದೆ ನೀಡಿ ಮುಪ್ಪಿನ ವರೆಗೆ
ಕೈಹಿಡಿದು ಕಾಪಾಡಯ್ಯ