೧. ಆದಿ ಕರ್ತ ಕ್ರಿಸ್ತನೇ
ಸೀಳಲ್ಪಟ್ಟ ಬಂಡೆಯೇ
ನೀನು ಪಟ್ಟಗಾಯವೂ
ಹೊಯ್ದ ನೀರೂ ರಕ್ತವು
ನನ್ನ ಪಾಪ ನೀಗಿಸಿ ಪೂರ್ಣಶುದ್ಧ ಮಾಡಲಿ
೨. ದೈವಕಟ್ಲೆ ಕೈಕೊಂಡು
ಬಾಳಶಕ್ತಿಯಿಲ್ಲವು
ಎಷ್ಟು ತಾಪಪಟ್ಟರೂ
ಕಣ್ಣೀರೆಷ್ಟು ಬಿಟ್ಟರೂ
ನನ್ನ ದ್ರೋಹ ಹೋಗದು
ಕರ್ತಾ ನೀನೆ ರಕ್ಷಿಸು
೩. ಯೇಸು ನಿನ್ನ ಶಿಲುಬೆ
ನನ್ನಾಧಾರವಾಗಿದೆ
ನಾನು ಘೋರ ಪಾಪಿಯು
ನೀತಿ ವಸ್ತç ಹೊದಿಸು
ನೀನು ತಳ್ಳಿಬಿಟ್ಟರೆ
ಬೇರೆ ಗತಿ ಎಲ್ಲಿದೆ?
೪. ಭೂನಿವಾಸದಲ್ಲಿಯೂ
ಸಾಯುತ್ತಿರುವಾಗಲೂ
ನ್ಯಾಯತೀರ್ಪಿನಲ್ಲಿಯೂ
ಯುಗಯುಗವೆಂದಿಗೂ
ಸೀಳಲ್ಪಟ್ಟ ಬಂಡೆಯೆ
ನೀನೆ ದಿಕ್ಕು ನನಗೆ