ಆನಂದವಾದ ಜೀವಿತ

ಆನಂದವಾದ ಜೀವಿತ
ಪಡೆದುಕೊ ಆತ್ಮವೇ
ನೀನು ದೇವರ ರಾಜ್ಯಕೆ
ಸೇರುವಿ ನಿಶ್ಚಯ
ಸದಾಕಾಲವು ಭಯವಿಲ್ಲದೆ
ಹರ್ಷಿಸುತ್ತಾ ಅಲ್ಲಿರುವಿ ನೀನು

೧. ದೇವರು ನಿನ್ನ ನಾವಿಕ
ದೋಣಿಯೊಳ್ ನಡಿಸುವನು
ಪ್ರತಿ ದಿನ ಹೊಸ ಹೊಸ
ಪಾಠವ ನಿನಗೆ ಆತ್ಮನು ಕಲಿಸುವನು
ಸದಾಕಾಲವು ಭಯವಿಲ್ಲದೆ
ಹರ್ಷಿಸುತ್ತಾ ಅಲ್ಲಿರುವಿ ನೀನು

೨. ನಿನ್ನ ಕಾಂತ ಅತಿಶಯನು
ಜನರಲ್ಲಿ ಮನೋಹರನು
ನಿನ್ನ ದೋಷಗಳನ್ನು ಎಲ್ಲಾ
ಪರಿಹಾರ ಮಾಡುವನು
ಸದಾಕಾಲವು ಭಯವಿಲ್ಲದೆ
ಹರ್ಷಿಸುತ್ತಾ ಅಲ್ಲಿರುವಿ ನೀನು