ಆನಂದಿಸುವೆನು ದೇವಾ
ಈ ನಿನ್ನ ವಾಕ್ಯದಲ್ಲಿ
ಧ್ಯಾನಿಸುತ್ತಿರುವೇ ನಾನು
ರಾತ್ರಿಯೂ ಹಗಲೂ ದೇವಾ
೧. ಬಂಗಾರಕ್ಕಿoತ ಶ್ರೇಷ್ಠ
ಈ ನಿನ್ನ ವಾಕ್ಯ ದೇವ
ಅಪರಂಜಿಕ್ಕಿoತ ಶ್ರೇಷ್ಠ
ಈ ನಿನ್ನ ವಾಕ್ಯವು
೨. ಸಂಪತ್ತಿನಲ್ಲಿ ಹೇಗೋ
ಆನಂದಿಸುವೆನು ಹಾಗೆ
ನಿನ್ನ ವಾಕ್ಯದಲ್ಲಿ ದೇವ ಆನಂದಿಸುವೆನು
೩. ಕಾಲಿಗೆ ದೀಪ ದೇವ
ಮಾರ್ಗಕ್ಕೆ ಬೆಳಕು ನನಗೆ
ಆನಂದದಿoದ ದೇವ
ನಾ ನಡೆಯುತ್ತಿರುವೆನು
೪. ಪರಲೋಕದಿಂದ ಬಂದ
ಆತ್ಮೀಕ ಮನ್ನ ದೇವ
ಪ್ರತಿ ದಿನ ತಿಂದು
ನಾನು ಆನಂದಿಸುವೆನು
೫. ನಾ ತೊರೆದು ಬಿಡೆನು ದೇವ
ಈ ನಿನ್ನ ವಾಕ್ಯವನ್ನು
ಘನಪಡಿಸುವೆನು ದೇವ
ಈ ನಿನ್ನ ವಾಕ್ಯವ