ಆರಾಧನೆ ಆರಾಧನೆ ಆತ್ಮ ಸ್ವರೂಪನೆ
ನಿನ್ನ ಶಿಲುಬೆಯ ದೃಷ್ಟಿಸಿ
ನಿನ್ನ ಪಾದದಲ್ಲಿ ಮೊಣಕಾಲೂರಿ
ಪೂರ್ಣ ಹೃದಯದಿಂದ
ನಿನ್ನನ್ನೆ ಸ್ತುತಿಸಿ
೧. ಬಲಪಡಿಸ್ಯೇಸು ನನ್ನಾತ್ಮವ
ಜೋಲು ಬಿದ್ದ ಕೈಗಳ
ನಡಗುವ ಮೊಣಕಾಲ
ಪ್ರತಿ ನಿಮಿಷವೂ ನಿನ್ನ
ಪ್ರಾರ್ಥಿಸುವ ಆತ್ಮನಿಂದ
೨. ಉದಯ ಕಾಲದಲ್ಲಿ
ನಿನಗೆ ಸ್ತೋತ್ರ ಬಲಿ
ನೂತನ ಕೃಪೆಯಿಂದ
ಹೊಸ ವರಗಳಿಂದ
ಈ ದಿನವೂ ನಡಿಸು
ಪರಿಶುದ್ಧ ಆತ್ಮನಿಂದ
೩. ಕರುಣಿಸು ಯೇಸು
ಭಾರತÀ ದೇಶವ
ಸುರಿಸಿ ನಿನ್ನ ರಕ್ತವ
ಅಗ್ನಿಯುಕ್ತ ಆತ್ಮವ
ಎಲ್ಲರೂ ಸ್ತುತಿಸಲಿ
ನಿನ್ನಯ ನಾಮವ