ಆರಾಧಿಸೋಣ ಬನ್ನಿರಿ

ಆರಾಧಿಸೋಣ ಬನ್ನಿರಿ
ಆಹಾ ಸ್ತುತಿಸೋಣ ಬನ್ನಿರಿ
ಕರ್ತನ ನಾಮವ ಹಾಡಿ ಪಾಡಿ ಸ್ತುತಿಸುವ

೧. ಯಾಕೋಬಿನ ವಂಶದವರು ಉಲ್ಲಾಸಗೊಳ್ಳುವರು
ಚಿಯೋನಿನ ಕರ್ತನಲ್ಲಿ
ಹೆಚ್ಚಳ ಪಡುವರು
ಸ್ತುತಿ ಘನ ಮಹಿಮೆಯು
ಆತನಿಗೆ ಸಲ್ಲಿಸುತ
ಕರ್ತನ ನಾಮವ ಕೊಂಡಾಡುವ

೨. ಮುಂಜಾನೆ ಎದ್ದು
ಮೊಣಕಾಲೂರಿ ಆರಾಧಿಸೋಣ
ಜಜ್ಜಿಹೋದ ಎಲುಬುಗಳು
ಆನಂದ ಪಡುವವು
ಶಾರೋನಿನ ಹೂಗಳಂತೆ
ಪರಿಮಳ ಬೀರುತ್ತ
ಕ್ರಿಸ್ತನ ಮಹಿಮೆಯ ಸಾರೋಣ

೩. ನಿನ್ನ ಮೊರೆ ಹೊಕ್ಕವರೆಲ್ಲಾ
ಸಂತೋಷ ಪಡುವರು
ಹರ್ಷ ಹೃದಯ ಒಳ್ಳೇಯ
ಔಷಧ ಹೇಳಿದ ದೇವರು
ನಮ್ಮ ಪ್ರಾಣ ಆತ್ಮವ
ಉಜ್ಜೀವನ ಮಾಡಿದ
ಕರ್ತನ ನಾಮಕ್ಕೆ ಸ್ತೋತ್ರವು