ಅತಿಶಯ ಪ್ರೀತಿಯ ಸಾಗರ
ದೇವರ ಕರುಣೆಯೆ
ಪರಲೋಕದಿಂದ ಭೂಮಿಗೆ ಇಳಿದು ಬಂದನು ಯೇಸುರಾಜ
೧. ಪಾಪಿಗೆ ರಕ್ಷಕ ಯೇಸು
ರೋಗಿಗೆ ಒಳ್ಳೆಯ ವೈದ್ಯ ದುಃಖದವರಿಗೆಲ್ಲ ಆದರಣೆಯ ಕರ್ತನು ಎಲ್ಲರಿಗೂ ಉತ್ತರವೆ
೨. ಸ್ವಾರ್ಥವ ನಾನಿಂದು ತ್ಯಜಿಸಿ
ನಾ ನೆಂಬ ಕೋಟೆಯ ಕೆಡವಿ
ಶರೀರದಾಶೆಗೆ ಇಲ್ಲವೆಂದ್ಹೇಳಿ
ನಾ ಆತ್ಮನಿಗೆ ಒಳಗಾಗುವೆ
೩. ದೀನರು ದೇವರ ಕೃಪೆಯ
ಹೊಂದಲು ಯೋಗ್ಯರು ನಿಜವೆ
ನಿಜವುಳ್ಳ ಹೊಸದಾರಿಯ ಹಿಂಬಾಲಿಸುತ್ತಾ
ನಾ ಯೇಸುವಿನ ಹಾಗಿರುವೆ