೧. ಆ ಸಾಲೆಮ್ ಪಟ್ಣ ಸೇರಲೇ
ಅಲ್ಲಿರ್ವ ಸಂಪತ್ತೆನ್ನದು
ಈ ಅಂಧಕಾರ ತೀರಲೆ
ಅಲ್ಲೆಂದೂ ಬೆಳಕಿರ್ವದು
ಪಲ್ಲವಿ
ಓ ಪಟ್ಣವೇ ಸ್ವದೇಶವೆ
ಸ್ವರ್ಣಾಲಂಕೃತ ಗೃಹವೆ
ನಿರೀಕ್ಷಿಸಿ ಸಂತೋಷಿಪೆ
ವಿಶ್ವಾಸದಿ ನಾ ದೃಷ್ಟಿಪೆ
ನಾನೆಂದೂ ಅಲ್ಲಿ ಸೇರುವೆ
ಎನ್‌ವಸ್ತಿಯೇ ನಿರಂತ್ರಕ್ಕೆ
೨. ಆ ಗೃಹದೊಳ್ ರಕ್ಷಕನು
ಎನ್ನೆಕ್ಯದೊಳ್ ಇರ್ವನು
ಕೈ ಹಿಡಿದೆನ್ನ ನಡಿಸಿ
ತೋರುವನೆಲ್ಲ ಪ್ರೀತಿಸಿ
೩. ಅಲ್ಲಿರ್ವ ಜೀವ ವೃಕ್ಷವು
ಮಧುರ ಫಲ ವೀವದು
ವೃಕ್ಷಂಗಳಿo ಸುವಾಸನೆ
ಒಯ್ಯೋದು ಗಾಳಿ ಮೆಲ್ಲನೆ
೪. ಇಂಪಾದ ಹಾಡು ಕೇಳುತೆ
ವೀಣೆಯ ಧ್ವನಿ ಕೇಳುತೆ
ದೂತರ ಸೈನ್ಯದೊಂದಿಗೆ
ಬಿಳಿ ನಿಲ್ವಂಗಿಯವರೆ