ಆಹಾ ಅಂಜೂರವು ಚಿಗುರದಿದ್ದರೂ
ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ
ಆ. . ಆ. . ಆ. . ಆ. .
೧. ನಾನು ಯೆಹೋವನಲ್ಲಿ ಉಲ್ಲಾಸಿಸುವೆನು
ರಕ್ಷಕನಾದ ದೇವರಲ್ಲಿ ಆನಂದಿಸುವೆನು
೨. ನನ್ನ ಕಾಲನ್ನು ಜಿಂಕೆಯoತೆ
ಚುರುಕು ಮಾಡು
ಕರ್ತನಾದ ಯೆಹೋವನೇ
ನೀನೇ ನನ್ನ ಬಲವು
೩.ಉನ್ನತ ಪ್ರದೇಶಗಳಲ್ಲಿ
ನನ್ನನ್ನು ನಡೆಸುವಿ ನೀ
ತಂತಿ ವಾದ್ಯದೊಡನೆ
ಹಾಡುತ್ತಿರುವೆನು