ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ
ಪ್ರಾರ್ಥನೆ ಕೇಳಲಿ
ಯಾಕೋಬನ ದೇವರ ನಾಮವು ನಿನ್ನನ್ನುದ್ಧಾರ ಮಾಡಲಿ
ನಿನ್ನನ್ನುದ್ದಾರ ಮಾಡಲಿ
೧. ನಿನ್ನ ಕಣ್ಣೀರ ಪ್ರಾರ್ಥನೆ
ಪರಲೋಕಕ್ಕೇರಿ ಹೋಗಲಿ
ನಿನ್ನ ಹೃದಯ ಬೇಗೆಯು
ಧೂಪದಂತೆ ಏರಲಿ
ನನ್ನೇಸುವ ರಕ್ತಮಯ
ಹಸ್ತಗಳ ಮಧುರ ಸ್ವರ್ಶ
ತಂಪನ್ನು ನೀಡಿ ತಣಿಸಲಿ
೨. ದಾರಿ ತಪ್ಪಿದ ಬಾಳಿಗೆ
ಜೀವದ ಮಾರ್ಗ ತೋರಲಿ
ತಾಳ ತಪ್ಪಿದ ರಾಗಕ್ಕೆ
ನೂತನ ಕೀರ್ತನೆ ನೀಡಲಿ
ತನ್ನಾತ್ಮನ ಶಕ್ತಿಯಿಂದ
ಆನoದದ ತೈಲದಿಂದ
ಅಭಿಷೇಕ ಮಾಡಿ ಸಂತೈಸಲಿ
೩. ನಿನ್ನ ಸಂಕಷ್ಟಗಳನ್ನೆಲ್ಲಾ
ತಾನೇ ಸಫಲ ಮಾಡಲಿ
ಪವಿತ್ರ ನಿವಾಸದಿಂದಲೆ
ನಿನಗೆ ಸಹಾಯ ನೀಡಲಿ
ರೆಕ್ಕೆಗಳ ಹೊದಗಿಸಿ
ಪಕ್ಕಗಳ ಮರೆಯಲ್ಲಿ
ಆಶ್ರಯ ನೀಡಿ ರಕ್ಷಿಸಲಿ