ಇಗೋ ಮನುಷ್ಯರ ಮಧ್ಯದಿ
ದೇವಾದಿ ದೇವನು
ವಾಸ ಮಾಡುವನು
೧. ದೇವ ಸಮಾನನಾದವನೇ
ಭೂಮಿಗಿಳಿದು ಬಂದವನೇ
ಅಪಮಾನವನ್ನೂ ನಿಂದೆ ಶಿಕ್ಷೆಯನ್ನೂ
ನೀನು ತಾಳಿದಿ ವಿಧೇಯನಾಗಿ
೨. ನಿನ್ನ ಶಿಲುಬೆಯ ಸಾವಿನಲ್ಲಿ
ಎಲ್ಲರನ್ನು ನೀ ರಕ್ಷಿಸಿದಿ
ನಿನ್ನ ಕರುಣೆಯನ್ನೂ ನಿನ್ನ ಕೃಪೆಯನ್ನು
ಸದಾ ಹಾಡಿ ಕೊಂಡಾಡುವೆನು
೩. ಪುನರುತ್ಥಾನವಾದವನೇ
ತಿರಿಗೊಮ್ಮೆ ಬರುವವನೇ
ಸಿಂಹಾಸಿನನೇ ಯಜ್ಞದ ಕುರಿಯೇ
ಸ್ತೋತ್ರ ಪ್ರಭಾವ ನಿಮಗಿರಲಿ