ಇದ್ದಂತೆ ಬಂದೆ ಯೇಸುವೆ

೧. ಇದ್ದಂತೆ ಬಂದೆ ಯೇಸುವೆ
ನಾ ಪಾಪಿ ಎಂದು ತಿಳಿದು
ನೀ ಸತ್ತಿ ನನಗಾಗಿಯೇ
ನನ್ನನ್ನು ದೃಷ್ಟಿಸ್ಯೇಸುವೆ

೨. ಇದ್ದಂತೆ ಬಂದೆ ಯೇಸುವೆ
ನಾ ಕೆಟ್ಟು ಹೋದ ದ್ರೋಹಿಯೇ
ನೀ ಮಾತ್ರ ಗತಿ ನನಗೆ
ನನ್ನನ್ನು ಕ್ಷಮಿಸುಯೇಸುವೆ

೩. ಇದ್ದಂತೆ ಬಂದೆ ಯೇಸುವೆ
ನಿನ್ ಕೃಪೆಯನ್ನು ನೆನಸಿ
ದೌರ್ಭಾಗ್ಯ ನೋಡಿತಳ್ಳದೆ
ನನ್ನನ್ನು ಸೇರಿಸ್ಯೇಸುವೆ

೪. ಇದ್ದಂತೆ ಬಂದೆ ಯೇಸುವೆ
ಇನ್ಯಾವ ದಿಕ್ಕು ಕಾಣದೆ
ನಿನ್ನನ್ನು ಮಾತ್ರ ನಂಬಿದೆ
ನನ್ನನ್ನು ರಕ್ಷಿಸ್ಯೇಸುವೆ