ಇಂದಿಲ್ಲ ನಾಳೆಯು ನಿಶ್ಚಯವೇ

೧. ಇಂದಿಲ್ಲ ನಾಳೆಯು ನಿಶ್ಚಯವೇ
ಕಣ್ಣೀರನ್ನಾರಿಸುತ್ತೇ
ಇಂದಿಲ್ಲ ನಾಳೆಯು ಕಾರ್ಗತ್ತಲೇ
ಸಂದು ದಿನ ಹರಿಯುತೆ

ಪಲ್ಲವಿ
ಇಂದಿಲ್ಲ ನಾಳೆಯು ಚಿಂತೆಗಳು
ನೀಗಿ ಹರ್ಷವಾಗುತ್ತೆ
ಇಂದಿಲ್ಲ ನಾಳೆಯು ಸ್ವಕೀಯರ
ಕರ್ತ ಸ್ವರ್ಗಕ್ಕೊಯ್ವನು

೨. ಇಂದಿಲ್ಲ ನಾಳೆಯು ನಾವರ್ಯೆವು
ಕ್ರಿಸ್ತೆö್ಯÃಸುವೆ ಬರುವನು
ಇಂದಿಲ್ಲ ನಾಳೆಯೋ ಆತನೊಡ
ಭಾಗ್ಯಕ್ಕೆ ಸೇರುವೆವು

೩. ಇಂದಿಲ್ಲ ನಾಳೆಯೋ ಹೌದೆಮಗೆ
ಜೀವದಂತ್ಯವಾಗ್ವದು
ಹೋರಾಟ ತೀರಿಸಿ ಜೈಸುವೆವು
ಕರ್ತನೊಡ ಸರ‍್ವೆವು.