ಇದು ಕೊಯ್ಲಿನ ಸಮಯ
ಸುಗ್ಗಿಯ ಕಾಲ
ಪ್ರಾರ್ಥನೆ ಮಾಡೋಣವೇ
ಪೈರನ್ನು ನೋಡೋಣವೇ
ಬೆಳೆಯನು ಕೊಯ್ಯೋಣವೇ
೧. ಬೆಳೆ ಎಷ್ಟೋ ವಿಸ್ತಾರವಾಯಿತೇ
ಬೆಳೆಗೆ ಕೆಲಸದವರಿಲ್ಲವೇ
ಕರ್ತನ ಕೆಲಸವು ನಿಂತ್ಹೋಯಿತೇ
೨. ಸಭೆಯೇ ನೀ ಮೌನವಾಗದಿರು
ಕರ್ತನ ಕೆಲಸಕ್ಕೆ ತೊಡಗೀಗಲೇ
ಯಜಮಾನ ಕೆಲಸಕ್ಕೆ ಕರೆಯುವನು
೩. ಸಂಕಟ ಶ್ರಮವನ್ನು ನೀ ತಾಳಿಕೋ
ಪ್ರತಿಫಲ ಆತನು ಕೊಡುವನು
ಜೀವದ ಫಲವನ್ನು ನೀ ಹೊತ್ತು ತಾ
೪. ಕಣ್ಣೀರಿನಿಂದ ನೀ ಹೋಗೀಗಲೆ
ವಾಕ್ಯದ ಬೀಜವ ಬಿತ್ತೀಗಲೆ
ಸಮೃದ್ಧಿ ಬೆಳೆಗೀಗ ಸಮಯವೆ