ಇದುವೇ ಪ್ರಸನ್ನ ವೇಳೆಯೂ

ಇದುವೇ ಪ್ರಸನ್ನ ವೇಳೆಯೂ
ರಕ್ಷಣಾ ದಿನವೂ
ಕೃಪಕಾಲವೂ ಇಂದೀಗಲೆ

೧. ಪಾಪಿಯೇ ಮಾನಸಾಂತರಪಡು
ಪಾಪದ ಮಾರ್ಗ ತ್ಯಜಿಸಿಬಿಡು
ಕ್ರಿಸ್ತನ ಹತ್ರ ಬಂದೀಗ
ಕ್ಷಮಾಪಣೆ ನೀ ಹೊಂದೀಗ...

೨. ಪಾಪದ ಭಾರ ಏಕೆ ಹೊರುತ್ತಿ
ತೀರ್ಪಿಗೆ ಏಕೆ ಗುರಿಯಾಗುತ್ತಿ
ಶಿಲುಬೆ ತಾಳಿದ ಯೇಸುವನು
ನಂಬಿ ನೀ ಹೊಂದು ಜೀವವನು...

೩. ಒಂದೆ ಸಾರಿ ನೀ ಸಾಯುವುದು
ಆ ಮೇಲೆ ನ್ಯಾಯ ತೀರ್ಪಾಗ್ವದು
ದೇವರ ನಿಜ ನೇಮಕವು
ತಪ್ಪಿಸಿಕೊಳ್ಳಲು ಅಸಾಧ್ಯವು...