ಇಂದು ಸಬ್ಬತಾಗಿದೆ

೧. ಇಂದು ಸಬ್ಬತಾಗಿದೆ
ಹರ್ಷಕರ ದಿನವೆ
ಇಂದು ನಾನೇಕಾಂತದಲ್ಲಿ
ಲೋಕಗದ್ದಲಿಲ್ಲದೆ
ದೇವಧ್ಯಾನ ಮಾಡುವೆ
ಸೇರಿ ದೇವರೈಕ್ಯದಲ್ಲಿ ಐಕ್ಯದಲ್ಲಿ

೨. ಇಂದು ಸಬ್ಬತಾಗಿದೆ
ಹರ್ಷಕರ ದಿನವೆ
ಹುಡುಕೋಣ ಕೃಪಾಸ್ಥಾನ
ಮೇಲಕ್ಕೆತ್ತಿ ಹೃದಯ
ಇಲ್ಲಿ ದೇವರಾಲಯ
ಪರಿಶುದ್ಧ ಸನ್ನಿಧಾನ ಸನ್ನಿಧಾನ

೩. ಇಂದು ಸಬ್ಬತಾಗಿದೆ
ಹರ್ಷಕರ ದಿನವೆ
ಪರಿಶುದ್ಧ ವಾಕ್ಯವನ್ನು
ಮನ ಕೊಟ್ಟು ಓದುವ
ಅದರಿಂದ ಹೊಂದುವ
ದಿವ್ಯ ಆತ್ಮ ತ್ರಾಣವನ್ನು
ತ್ರಾಣವನ್ನು

೪. ಇಂದು ಸಬ್ಬತಾಗಿದೆ
ಹರ್ಷಕರ ದಿನವೆ
ಸೇರಿ ದೇವಗೃಹದಲ್ಲಿ
ಸರ್ವಭಕ್ತರೊಂದಿಗೆ
ಆತನನ್ನು ಬೇಡಲೆ
ತೃಪ್ತಿಯಾಗೋದಾತ್ಮದಲ್ಲಿ ಆತ್ಮದಲ್ಲಿ