ಇನ್ನು ಎಷ್ಟು ಕಾಲವು
ನನ್ನ ಯೇಸುವಿನ್ ಬರೋಣವು
ನಿನ್ ಮುದ್ದು ಮುಖವ ನೋಡಿ
ನಾನೆಂದು ತೃಪ್ತಿಯಾಗುವೆ
ಎಂದು ನಾ ನಿನ್ ಪಾದವ ಮುದ್ದಿಟ್ಟುಹರ್ಷಿಸುವೆ
ಎಂದು ಆರಾಧಿಸುವೆ
ಎಂದು ನಿನ್ ಸ್ತುತಿಸುವೆ
೧. ಬೇಗನೇ ಬರುತ್ತೇನೆಂದು
ಹೇಳಿ ಹೋದಿ ನೀ
ಯಾವಾಗ ಬರುತ್ತಿ ಅಪ್ಪಾ
ನಿಮಗಾಗಿ ಬಿಡಾರ ಸಿದ್ಧ ಮಾಡುತ್ತೇನೆಂದು
ಹೇಳಿನೀ ಹೋದಿಯಲ್ಲಾ
ಎಂದು ಆ ಬಿಡಾರದೊಳ್
ವಾಸಿಸಿ ಹರ್ಷಿಸುವೆ
೨. ನಂಬಿಕೆ ಹುಟ್ಟಿಸಿ ಪೂರೈಸುವವನು ಆಗಿರುವ ಯೇಸುವೆ
ಸ್ಥಿರ ಚಿತ್ತದಿಂದ ಈ ಓಟವನ್ನು
ಓಡುವಂತೆ ನೀ ಸಹಾಯ ಮಾಡು
ಬೇಗ ಬಾರಯ್ಯಾ ಕರ್ತಾ
ನಿನಗಾಗಿ ಕಾದಿರುವೆ