ಇಂಪಾಗಿದೆ ಬಹು ಇಂಪಾಗಿದೆ
ಯೇಸು ನಾಮವು ಇಂಪಾಗಿದೆ
ಇಂಪಾಗಿದೆ ಅತೀ ಇಂಪಾಗಿದೆ
ಯೇಸು ನಾಮವೆ
೧. ಪಾಪವೆಲ್ಲ ತೀರಿಸ ಬಂದ
ಯೇಸು ನಾಮವೆ
ಶಾಪರೋಗ ನೀಗಿಸ ಬಂದ
ಯೇಸುವಿನ ನಾಮವೆ
೨. ನಿನ್ನೆ ಇಂದು ಎಂದು ಮಧುರ
ಯೇಸು ನಾಮವೆ
ಜೇನಿಗಿಂತ ಮಧುರವಾದ
ಯೇಸುವಿನ ನಾಮವೆ
೩. ಜೀವ ಮಾರ್ಗ ತೋರುವ ನಾಮ
ಯೇಸು ನಾಮವೇ
ಜೀವಬಲ ತರುವ ನಾಮ
ಯೇಸುವಿನ ನಾಮವೆ