ಇಸ್ರಾಯೇಲ ಏಕ ರಾಜನಾಗಿ

೧. ಇಸ್ರಾಯೇಲ ಏಕ ರಾಜನಾಗಿ
ಬಾಳುವ ದೇವ
ಸತ್ಯ ಜೀವ ಮಾರ್ಗ ಯೇಸು ದೇವ
ಧರೆಯಲ್ಲಿ ಪ್ರೇಮದಾಹಕ್ಕಾಗಿ
ಜನಿಸಿದ ದೇವ
ನಿತ್ಯ ಜೀವಿತ ನೀಡುವ ದೇವ

ಪಲ್ಲವಿ
ಅಪ್ಪಾ ಪಿತನೆ ದೇವನೆ
ನಿನ್ನಯ ರಾಜ್ಯವ ಕರುಣಿಸು ನೀ
ನಿನ್ನಯ ವಚನವು ಭೂಮಿಯಲ್ಲಿ
ಎಂದೆoದೂ ಚಿರಾಯವಾಗಲಿ

೨. ಕಂಗೆಡಲು ಅಂದು ನಿನ್ನ ಮಾತು ಕೇಳಿದೆ
ಹಸಿದಿದ್ದ ಜನತೆಗೆ ಮನ್ನ ನೀಡಿದೆ ಸುಡು ಬಿಸಿಲಿಗೆ ತಂಪು ನೆರಳಾದೆ ಇರುಳಲ್ಲಿ ಪ್ರೇಮ ಜ್ವಾಲೆಯಾದೆ ಸಿನಾಯ ಶಿಖರದ ಮೇಲೆ ನೀ ದಶಾಜ್ಞೆಗಳನ್ನು ಕರುಣಿಸಿದೆ

೩. ಮಾನವನಾಗಿ ಅವತರಿಸಿ
ಕಲ್ವಾರಿ ಬೆಟ್ಟದಿ ಬಲಿಯರ್ಪಿಸಿ
ರೊಟ್ಟಿಯ ರೂಪದಿ ಅನುದಿನವು
ಇಂದಿಗೂ ಜೀವಂತನಾಗಿರುವಿ
ಸತ್ಯವು ಮಾರ್ಗವು ಆದವನೆ
ನಿನ್ನಯ ನಾಮಕ್ಕೆ ಜಯಕಾರ