ಈ ವರೆಗೆಮ್ಮ ದೇವರು

೧. ಈ ವರೆಗೆಮ್ಮ ದೇವರು
ಸಹಾಯ ಮಾಡಿದ್ದಾನೆ
ಈ ವರೆಗ್ಹಗಲಿರುಳು
ನಮ್ಮನ್ನು ಕಾದಿದ್ದಾನೆ
ಈ ವರೆಗೆಮ್ಮ ನಡೆಸಿ
ಸಂತೋಷ ದಯಪಾಲಿಸಿ
ಉದ್ಧಾರ ಮಾಡಿದ್ದಾನೆ

೨. ಸಂಸ್ತುತಿ ನಿಂಗೆ, ಕರ್ತನೆ
ಸಂಕೀರ್ತಿ ನಮಸ್ಕಾರ
ನಿಶ್ಚಲ ಪ್ರೀತಿಯಿಂದಲೇ
ಸ್ವಪ್ರಜೆಯ ವಿಚಾರ
ನೀ ಗೈದದನ್ನು ನೆನಸಿ
ಕೊಂಡಾಡುತ್ತೇವೆ ಹರ್ಷದಿ
ನಿನ್ನೆಲ್ಲಾ ಉಪಕಾರ

೩. ಇನ್ನಾದರೂ ಸ್ವಜನಕ್ಕೆ
ಆಶ್ರಯಸ್ಥಾನವಾಗು
ಸರ್ವತ್ರ ಪ್ರತಿಗಳಿಗೆ
ಸ್ವತಃ ಸಮೀಪವಾಗು
ಕ್ರಿಸ್ತೆö್ಯÃಸುಶ್ರಮಮೂಲದಿಂ
ಸಮಸ್ತ ಕಷ್ಟದೊಳಗಿಂ
ನಮ್ಮನ್ನು ಪಾರು ಮಾಡು