ಈವರೆಗೆಮ್ಮನು ಕಾಯ್ದ ಯೇಸುವೇ
ಹೊಸ ದಿನವ ನೋಡಲು ಮಾಡಿದ್ದಿ
ಈವರೆಗೆಮ್ಮನು ನಡೆಸಿದ ದೇವರು
ಕಡೆವರೆಗೂ ನಡಿಸಿ ಕಾಯ್ವನು..ಆ ಆ
ಚರಣಗಳು
|| ಕಳೆದ ದಿನದೊಳ ಆಶ್ಚರ್ಯದಿಂದಲೇ
ಕಷ್ಟ ನಷ್ಟದೊಳ ನಡಿಸಿ ಕಾಯ್ದಿ ನೀ ||
|| ನಡಿಸಿ ಕಾಯ್ದಿನೀ ||
|| ನಿನ್ನ ಪ್ರೀತಿಯು ಅಪಾರವಾದದ್ದು
ಹೀನವಾದಂತ ನನ್ನನ್ನು ರಕ್ಷಿಸಿದ್ದೀ ||
|| ನನ್ನನ್ನು ರಕ್ಷಿಸಿದ್ದೀ ||
|| ಓ ಯೇಸುವೆ ನನ್ನ ರಕ್ಷಕನೇ
ನನ್ನನ್ನು ನಡಿಸು ಈ ದಿನದೊಳ ||
|| ಈ ದಿನದೊಳ ||
|| ನನ್ನ ಜೀವಿತ ನಿಂಗೆ ಅರ್ಪಿಸುವೆ
ನಂಬಿಕೆಯಿAದಲೇ ಬಾಳಲು ಕಲಿಸು ||
|| ಬಾಳಲು ಕಲಿಸು ||