೧. ಈ ಯುಗ ಅಂತ್ಯವಾಗುತ್ತೆ
ನಮ್ಮ ನಿರೀಕ್ಷೆ ಹತ್ರವೆ
ಈ ಲೋಕ ಕಷ್ಟ ತೀರುತ್ತೆ
ನಿತ್ಯ ಸಂತೋಷಕ್ಕೆ ಸೇರ್ವೆನು
ಪಲ್ಲವಿ
ರಕ್ಷಕನು ಬೇಗನೇ ಬರ್ವನು
ಸಂತೋಷದಿA ಎದುರ್‌ಗೊಳ್ಳೋಣ
ಮುಂಜಾನೆಯೋ ಮಧ್ಯರಾತ್ರಿಯೋ
ನಿಜವೇ ಆತ ಬರ್ವನು
೨. ಎಚ್ಚರವಿದ್ದು ಪ್ರಾರ್ಥಿಸಿ
ಆತನ ಮಕ್ಕಳೆಲ್ಲರೇ
ಕಳ್ಳನಂತೆಯೇ ಬರಲು
ಆಳು ನೀ ಜಾಗರವಿದ್ಧಿಯೋ?
೩. ಬುದ್ಧಿಯುಳ್ಳ ಕನ್ನಿಕೆಯರು
ಎಣ್ಣೆ ಆರತಿಯೊಡನೆ
ಎಚ್ಚತ್ತು ಮದಲಿಂಗನ
ಮದುವೆ ಮನೆಗೆ ಹೋದರು.
೪. ಕ್ರಿಸ್ತನ ಮದಲಗಿತ್ತಿ
ಎಣ್ಣೆಯು ದೀಪದಲ್ಲುಂಟೆ
ನಿನ್ನನ್ನು ಮದಲಿಂಗನು
ಅರಿಯನೆAದ್ಹೇಳ್ವದು ಸತ್ಯವೋ
೫. ಆಜ್ಞಾಘೋಷದೊಡನೆಯೂ
ಪ್ರಧಾನ ದೂತ ಶಬ್ದವು
ದೇವಾ ತುತೂರಿ ಧ್ವನಿಯೊಳ್
ರಾಜನು ಮೇಘದಿ ಬರ್ವನು