ಈ ಲೋಕದ ಬೆಳೆಯು ಬೆಳೆದಿದೆ
ಶ್ರೀ ಯೇಸುವೆ ನನ್ನ ಕಳುಹಿಸು ನೀ
ನಿನ್ನ ವಾಕ್ಯವ ಸಾರುವೆನು
ನಿನ್ನ ಪ್ರೀತಿಯ ಹರಡುವೆನು
ನಿನ್ನ ಪ್ರೀತಿಯ ಹರಡುವೆನು
೧. ಕಷ್ಟ ಸಂಕಟವು ಹಿಂಸೆಯು ಬರಲೂ
ನಿನಗಾಗಿ ಸಹಿಸುವೆ ಕರ್ತನೆ
ನನ್ನ ಜೀವಿತದ ಅಂತ್ಯದವರೆಗೂ
ನಿನಗಾಗಿಯೇ ಜೀವಿಸುವೆ
೨. ನಾನು ಪಾಪದಲ್ಲಿ ಮುಳುಗಿರುವಾಗಲೇ
ನನ್ನ ಪ್ರೀತಿಸಿದ್ದಿ ನನ್ನ ಕರುಣಿಸಿದಿ
ನಿನ್ನ ಸೇವೆಗೆ ನನ್ನ ಅರ್ಪಿಸುವೆ
ನನ್ನ ಉಪಯೋಗಿಸು ದೇವರೆ