ಈ ಲೋಕಾರಣ್ಯದೊಳು ನಾನು
ಅಲೆದಾಡುತ್ತಿರಲು
ಮಾರ್ಗ ಕಾಣೆ ನನ್ನ ರಕ್ಷಕನೆ
ನೀನೆ ತೋರು ನನ್ನ ಮಾರ್ಗವ
ಪಲ್ಲವಿ
ನಿನ್ನ ಹೊರತು ನಾನು ಕಾಣಲಾರೆ
ನಿನ್ನ ಸುಮಾರ್ಗ ಇಹದೊಳು
ನೀ ನೋಡಿ ನನ್ನ ಕರುಣಿಸು
ಕೈ ಹಿಡಿದು ನನ್ನ ನಡಿಸು.
ಸಂಕಷ್ಟದಗ್ನಿಯೋಳು ನಾನು
ಹಾಯ್ದು ಹೋಗುತ್ತಿರಲು
ನೀ ನಂಗೆ ಹೇಳು ಧೈರ್ಯವನ್ನು
ನಾನು ನಿನ್ನ ಆಪತನು ಎಂದು.