ಉದಯದ ಸೂರ್ಯನಂತೆ
ಹುಣ್ಣಿಮೆ ಚಂದ್ರನAತೆ
ಮನೋಹರ ಕ್ರಿಸ್ತನು
ಅಮರ ಸಂದೇಶ ತಂದರು ಆ.ಆ.ಆ..
೧. ಶಾರೋನಿನ ಪುಷ್ಪವಾಗಿ
ಶಾಂತಿಯ ರಾಜನಾಗಿ
ಶಾಪವ ನೀಗಿಸಲು
ಪಾಪವ ಪರಿಹರಿಸಲು
ಬಂದನು ಇಂದು ಧರೆಗೆ
ನೀತಿಯ ಸೂರ್ಯನು
೨. ಬಡವರಿಗೆ ನೆರವಾಗಿ
ದೀನರಿಗೆ ವರವಾಗಿ
ಪಾಪಿಯ ಮುಕ್ತಿಯಾಗಿ
ಬಲಹೀನಗೆ ಶಕ್ತಿಯಾಗಿ ಆ.ಆ.ಆ..
ಬಂದನು ಇಂದು ಧರೆಗೆ
ನೀತಿಯ ಸೂರ್ಯನು