ಉನ್ನತನಾದವನೇ

೧. ಉನ್ನತನಾದವನೇ
ಸರ್ವಶಕ್ತನಾಗಿರುವವನೇ
ಮರೆಹೊಕ್ಕವನು ನಿನ್ನ ಆಶ್ರಯದಿ
ಸುರಕ್ಷಿತನಾಗಿರ್ವನು
ನನ್ನ ಶರಣನು, ದುರ್ಗವು ಭರವಸವು
ನೀನೆ ಮಹೋನ್ನತನೇ

ಪಲ್ಲವಿ
ನನ್ನನ್ನು ಬೇಟೆಗಾರನ ಬಲೆಯಿಂದಲೂ
ಮರಣಕರ ವ್ಯಾಧಿಯಿಂದಲೂ
ತಪ್ಪಿಸಿ ನನ್ನನ್ನು ತನ್ನ ರೆಕ್ಕೆಗಳಿಂದ
ತಾನೇ ಹೊದಗಿಸಿ, ಕಾಯುವನು

೨. ಇರುಳಲ್ಲಿರುವ ಭಯಕ್ಕೂ
ಹಗಲಲ್ಲಿ ಹಾರುವ ಬಾಣಕ್ಕೂ
ಕತ್ತಲಲ್ಲಿ ಸಂಚರಿಸುವ ವಿಪತ್ತಿಗೂ
ಮಧ್ಯಾಹ್ನದ ಹಾನಿಗಳೂ
ನನಗೆ ತಟ್ಟವು ನನ್ನನ್ನು ಮುಟ್ಟವು
ನನ್ನ ಶರಣನೆ ಕಾಯುವನು

೩. ರಕ್ಷಿಸುವಂಥವನೆ
ಎನ್ನನ್ನುದ್ಧರಿಸುವAಥವನೆ
ಎನ್ನ ಮೊರೆಯನ್ನು ಲಾಲಿಸಿ ಸದುತ್ತರವಂ
ದಯಪಾಲಿಸುವ ಕರ್ತನೆ
ದೀರ್ಘಾಯುಷ್ಯದಿಂದೆನ್ನ ತೃಪ್ತಿಪಡಿಸಿ
ಶ್ರೇಷ್ಠ ಭಾಗ್ಯವ ತೋರಿಪನು