೧. ಅದ್ಭುತ ಪ್ರೇಮ-ದೇವರ ಪ್ರೇಮ
ನಿಸ್ತುಲ್ಯ ಪ್ರೇಮ-ಯೇಸುವಿನ ಪ್ರೇಮ
ಸತ್ಯವಾದದ್ದು ಸ್ತುತ್ಯವಾದದ್ದು
ನಿತ್ಯವಾಗಿಹ ಸ್ವರ್ಗೀಯ ಪ್ರೇಮವಿದು
ಆಶ್ಚರ್ಯ ಪ್ರೇಮವೆ-ಎನ್ನೇಸು ಪ್ರೇಮವೆ
ಸತ್ಯವೂ ನಿತ್ಯವೂ ಸ್ತುತ್ಯವೂ
೨. ದೇವ ಸ್ವರೂಪನಾಗಿದ್ದ ಯೇಸು
ದೇವ ಸಮಾನನಾಗಿಹ ಪದವಿ
ತೊರೆದಿಟ್ಟನು-ಬರಿದಾದನು
ದಾಸನರೂಪವ ಧರಿಸಿ ಧರೆಗಿಳಿದನು
ಕಲ್ವಾರಿ ಪ್ರೇಮವೆ-ರಕ್ಷಕನ ಪ್ರೇಮವೆ
ಸತ್ಯವೂ-ನಿತ್ಯವೂ-ಸ್ತುತ್ಯವೂ
೩. ಮನುಷ್ಯ ಸಾದೃಷ್ಯನಾದಂಥ ಯೇಸು ಮಾನವನಾಗಿ ತಗ್ಗಿಸಿಕೊಂಡು
ಕ್ರೂರ ಮೃತ್ಯುವ-ಶಿಲ್ಬೆ ವೃಕ್ಷದಿ
ತಾನು ತಾಳಿದ ತಗ್ಗಿಸಿ ವಿಧೇಯದಿ
ಗೊಲ್ಗೋಥ ಯಜ್ಞವೆ -ಆಶ್ಚರ್ಯ ಪ್ರೇಮವೇ ಸತ್ಯವೂ-ನಿತ್ಯವೂ-ಸ್ತುತ್ಯವೂ
೪. ಅತ್ಯುನ್ನತ ಸ್ಥಾನಕ್ಕೇರಿದ ಯೇಸು
ಶ್ರೇಷ್ಟವಾದ ನಾಮ ಪಡೆದಿಹ ಯೇಸು
ಅಡ್ಡ ಬೀಳಿರಿ ಆರಾಧಿಸಿ ಸ್ವರ್ಗ ಮರ್ತ್ಯ ಪಾತಾಳದಲ್ಲಿರುವವರೆ
ನಿನಗೇ ಸ್ತೋತ್ರವು-ದೇವರೆ ಒಡೆಯನೆ
ಸತ್ಯವೂ ನಿತ್ಯವೂ ಸ್ತುತ್ಯವೂ