ಉನ್ನತ ದೇವನೆ ನನ್ನೇಸು ರಾಜನೆ

ಉನ್ನತ ದೇವನೆ ನನ್ನೇಸು ರಾಜನೆ ನಿನ್ನಯ ಪ್ರೀತಿಯ
ನನ್ ಹೃದಯ ಬಯಸಿದೆ

೧. ರೂಪಾಂತರಗೊಳಿಸಯ್ಯ ಮಹಿಮೆಯ ಕರ್ತನೆ
ನಿನ್ ಮುಖ ಭಾವದಿ
ಮಾರ್ಪಡಿಸು ನನ್ನನು

ಪಲ್ಲವಿ
ಹಗಲೆಲ್ಲ ಇರುಳೆಲ್ಲ ಹೃದಯ ನಿನಗಾಗಿ ಮಿಡಿಯುತ್ತಿದೆ
ನೆನಪೆಲ್ಲ ಮಾತೆಲ್ಲ - ಪ್ರಿಯನೆ ನಿನ್ನನ್ನೆ ನುಡಿಯುತ್ತಿದೆ

೨. ಹರುಷದ ಹೊನಲಲ್ಲಿ
ಎಂದೆAದು ಮುಳುಗುವೆ
ಸ್ತುತಿಸಿ ನಲಿಯುವೆ ಪರಿಶುದ್ಧನಾಗುವೆ

೩. ನಿನ್ ಪ್ರೀತಿ ಹರಡಲಿ
ಬಳ್ಳಿಯ ಹಾಗೆಯೆ
ಮಡಿಲಲ್ಲಿ ಮಲಗುವೆ
ಮಗುವಾಗಿ ಕರ್ತನೆ