ಎಂತು ವರ್ಣಿಸುವೆ
ನನ್ನ ದೇವರ ಕೃಪೆಯ
ನಾನೆಂತು ಸ್ತುತಿಸುವೆ
ಕರುಣಾಳು ಕರ್ತನ
೧. ದೇವರ ಕುವರ ದಿವ್ಯ
ಮಹಿಮೆ ನೀತಿ ಸ್ವರೂಪನೆ
ನೀತಿ ಸೂರ್ಯ ಮುಕ್ತಿದಾಯಕ
ನನ್ನ ಪ್ರಭುವೆ
೨. ಉನ್ನತಾಸನವನ್ನು ಬಿಟ್ಟು
ತಗ್ಗಿಸಿಕೊಂಡವನ
ನನ್ನ ದ್ರೋಹದ ಫಲವ ಅಂದು
ಸೈರಿಸಿಕೊAಡವನ
೩. ಪಾಪಿಯ ಶಾಪ ಹೊತ್ತು
ತೀರಿಸಬಂದ ರಕ್ಷಕನೆ
ಬೆಂದ ಮನವ ನಿನ್ನ ಕೃಪೆಯಿಂ
ತಣಿಸ ಬಂದವನೆ
೪. ನನ್ನ ಹೃದದಿ ನಿನ್ನ ವಾಕ್ಯವ
ಹರಿಯ ಮಾಡಿದಿ
ಮೋಕ್ಷದ ಆನಂದ ಎನಗೆ
ಹೊಂದ ತೋರಿದಿ
೫. ನಿತ್ಯ ಸ್ತೋತ್ರ ಸತ್ಯ ಸುಂದರ,
ನಿನ್ನ ನಾಮಕ್ಕೆ
ನಿತ್ಯ ಘನ ಸರ್ವ ಶ್ರೇಷ್ಟ
ನಿನ್ನ ಚರಣಕ್ಕೆ