೧. ಎಂಥ ಅದ್ಭುತ ರಕ್ಷಕ ಯೇಸು
ನನಗಾಗಿ ತಾನು ಸತ್ತ
ಶ್ರೇಷ್ಠ ರಕ್ತವ ಚೆಲ್ಲಿದ ಯೇಸು
ನನ್ನ ಪಾಪ ಸಾಲ ತೆತ್ತ
ಪಲ್ಲವಿ
ನನಗಾಗಿ ಯೇಸು ಸತ್ತಾ (೨)
ನನ್ನ ಪಾಪ ಹೊತ್ತಾ
ತನ್ನ ಪ್ರಾಣ ಕೊಟ್ಟಾ
ನನಗಾಗಿ ಯೇಸು ಸತ್ತಾ
೨. ನಮ್ಮ ದ್ರೋಹಗಳ ದೆಸೆಯಿಂದಾ
ಆತAಗೆ ಗಾಯವಾಯಿತು
ನರರೆಲ್ಲರ ಅಕ್ರಮದಿಂದಾ
ಆತನು ಜಜ್ಜಲ್ಪಟ್ಟನು
೩. ನಮಗೆ ಕ್ಷೇಮವನ್ನು ಕೊಡುವಾ
ದಂಡನೆ ಆತ ತಾಳ್ದನು
ಆತನ ಬಾಸುಂಡೆಗಳಿAದಲೇ
ನಮಗೆ ಗುಣವಾಗಿದೆ
೪. ಕುರಿಗಳಂತೆ ದಾರಿ ತಪ್ಪಿದ್ದು
ನಾವು ತೊಳಲುತ್ತಿರಲು
ನಮ್ಮ ದೋಷ ಫಲವ ತೆಗೆದು
ಆತನ್ಮೇಲೆ ಹಾಕಿದನು