ಎಂಥಾ ಗುರುವ ಕಂಡೆನಾ ಎನ್ನಾತ್ಮದಲ್ಲಿ ಎಂಥಾ ಗುರುವ ಕಂಡೆನಾ
೧. ಪಾಪಿ ಜನಕ್ಕೆ ಮೆಚ್ಚಿದ ಎನ್ ಸ್ವಾಮಿ
ಪಾಪದಿಂದ ದೂರ ಮಾಡಿದ
ತಾಪದಿ ನರಳುವ
ನಾನಾ ರೋಗಿಗಳಿಗೆ
ಕಾಪಕ್ಕೆ ಸೇರಿಸಿದ ಎನ್ನ ಸ್ವಾಮಿ
೨. ಬಂಧು ಬಳಗ ಬಂದು ಸ್ವಾಮಿಯ ಮುಂದೆ ಬಾಗುತ್ತಾ ನಿಂತಿಹರು ತಂದೆಯ ಚಿತ್ತದಂತೆ
ನಡೆಯುವ ಜನಕ್ಕೆ ಎನ್ನ ಬಳಗವೆಂದರು
ಎನ್ ಸ್ವಾಮಿ
೩. ಈ ನರಜನರಲ್ಲಿ ಎನ್ನ ಸ್ವಾಮಿ ದೀನ ಭಾವವನೆತ್ತಿದ ಮಾನ
ಬರಲಿ ಎಂದು
ಆಳಾಗಿ ದುಡಿದಿತ ಹನ್ನೆರಡು
ಶಿಷ್ಯರ ಪಾದ ತಾ ತೊಳೆದ