ಎAದೂ ಆನಂದ
ನನ್ನೇಸು ಕೊಡುವನು
ಸ್ತುತಿಸುವೆ ಸ್ತುತಿಸುವೆ
ಸ್ತುತಿಸುತ್ತಲೇ ಇರುವೆ
ಹಲ್ಲೆಲೂಯಾ ಆನಂದವೇ (೨)
೧. ಉನ್ನತನ ಮರೆಯಲ್ಲಿ
ಕರ್ತನ ನೆರಳಲ್ಲಿ
ಎಂದೂ ತಂಗುವೆ
ದೇವರನ್ನು ನೋಡಿ
ಆಶ್ರಯ ಗಿರಿಯೇ
ಎಂದು ಹೇಳುವೆ ಸ್ತುತಿಸುವೆ ಸ್ತುತಿಸುವೆ
೨. ತನ್ನ ರೆಕ್ಕೆಯೊಳ್ ನನ್ನನ್ನು ಹೊದಗಿಸಿ
ಕಾಯ್ದು ನಡೆಸುವಾ
ಆತನ ವಾಕ್ಯವು ಆತ್ಮನ ಕತ್ತಿಯು
ನನ್ನ ಖೇಡ್ಯವು
ಸ್ತುತಿಸುವೆ ಸ್ತುತಿಸುವೆ
೩. ದಾರಿಯಲ್ಲೆಲ್ಲ ನನ್ನನ್ನು
ಕಾಯಲು ದೂತರು ನನಗುಂಟು
ಪಾದಗಳು ಕಲ್ಲಿಗೆ
ತಗಲದಂತೆ ನನ್ನನ್ನು ಕಾಯ್ವರು ಸ್ತುತಿಸುವೆ ಸ್ತುತಿಸುವೆ