ಎದ್ದನಲ್ಲ ಯೇಸು ರಾಜನಿವ
ಕರ್ತನ ಅಧಿಕಾರ ನಿರೂಪಿಸಲು
ದೇವರಾಜ್ಯ ನಮ್ಮಲ್ಲಿ ಸ್ಥಾಪಿಸಲು
ಸೈತಾನ ಶಕ್ತಿಯ ತುಳಿದಾಕಲು ||
ಯೇಸುವೇ ನನ್ನಲ್ಲೇ ವಾಸಿಸು
ಇನ್ನು ನಾನಲ್ಲ ಎಂದು ನೀನಾಗಿರು ||
ರಾಜನೇ ಬಂದು ವಾಸಿಸು ನೀ
ಇನ್ನು ನಾನಲ್ಲ ಎಂದು ನೀನಾಗಿರು
೧. ರೋಗವನ್ನು ನೀಗಿಸಿ ಭೂತಗಳ ಓಡಿಸಿ
ಬಂಧವೆಲ್ಲಾ ವಿಮೋಚಿಸಲು
ಕುರುಡರು ಕುಂಟರು ಎಲ್ಲಾ
ಸ್ವಂತವಾಗಿ ಪಡೆಯಲು ದೇವರಾಜ್ಯವ
೨. ಭಯವೆಲ್ಲಾ ಮಾರ್ಪಡಿಸಿ
ನಿರಾಸೆ ನೀಗಿಸಿ
ಕುಣಿಯುತ ನಿತ್ಯದಿ ವಾಸಿಸುವ
ಮುಚ್ಚಿರುವ ಎಲ್ಲಾ ಬಾಗಿಲ ತೆರೆದು
ಮೆಸ್ಸೀಯಾ ರಾಜ ನಮಗಾಗಿ