ಎದ್ದೇಳಿ ವೀರರೇ ಸುವಾರ್ತೆ ಸಾರುವಾ
ನಾವೆಲ್ಲರೂ ಸೇರಿ ಕ್ರಿಸ್ತನ ಆಲಯ ಕಟ್ಟೋಣ
೧. ಮಂದಿರದಸ್ತಿವಾರ ಯೇಸು,
ಯೇಸು ದೇವಾ
ಅದರೊಳಗಿಹನು ದೇವಾಧಿದೇವಾ
ದೇವಾಧಿ ದೇವಾ
ಸಮರ್ಪಿಸುವ ಜೀವಂತ ಕಲ್ಲುಗಳು
ಹೋಗಿ ತನ್ನಿರಿ ಪರ್ವತದಿಂದ
ಸುತ್ತಮುತ್ತ ಹುಡುಕಿರಿ ನಿಮ್ಮ
ನಾವೆಲ್ಲರೂ ಸೇರಿ ಕ್ರಿಸ್ತನ
ಆಲಯ ಕಟ್ಟೋಣ
೨. ಕಲು ್ಲಮುಳ್ಳು ಸ್ವಾಮಿಗೆ ಬೇಡ, ಸ್ವಾಮಿಗೆ ಬೇಡ
ಸಜೀವ ಕಲ್ಲಾದ ನೀವೇ ಬೇಕು,
ನೀವೇ ಬೇಕು
ಆಪೇಕ್ಷೆಯಿಂದ ಹುಡುಕೋಣ ಬನ್ನಿ
ಕಾರ್ಗತ್ತಲಲ್ಲಿ ಚದುರಿದ ಜನರ
ನಿತ್ಯಜೀವದ ಬೆಳಕಿಗೆ ತಂದು
ನಾವೆಲ್ಲರೂ ಸೇರಿ ಕ್ರಿಸ್ತನ
ಆಲಯ ಕಟ್ಟೋಣ
೩. ಆಲಸ್ಯ ತ್ಯಜಿಸಿ ಬಂಧನ ಬಿಡಿಸಿ,
ಬಂಧನ ಬಿಡಿಸಿ,
ನಂಬಿಕೆಯಲ್ಲಿ ದೃಢವಾಗಿದ್ದು, ದೃಢವಾಗಿದ್ದು
ಸಾರಿರಿ ರಕ್ಷಣೆ ಸುವಾರ್ತೆಯನ್ನು
ಜೈಸಿರಿ ಅನೇಕ ಆತ್ಮಗಳನ್ನು
ದೇವರ ಆತ್ಮನ ಸಾಮರ್ಥ್ಯದಿಂದ
ಶೂರ ವೀರರಾಗಿ ಕ್ರಿಸ್ತನ ಆಲಯ ಕಟ್ಟೋಣ