ಅನಂತ ಸ್ತುತಿಗೀತೆ
ಹಾಡಿ ಕೊಂಡಾಡುವೆ - ಯೇಸುವೇ
ಹಲ್ಲೆಲೂಯ ಹಾಡುವೆ ಸ್ವಾಮಿ
ಜೀವಿತ ಕಾಲದಿ ನಿನ್ನನ್ನು
ಸ್ಮರಿಸುವೆ ಯೇಸುವೆ
ಮುಂದೆ ಮುಂದೆ ನಡೆಸು ನೀ ಸ್ವಾಮಿ
೧. ಜೀವನವೆಂಬ ಕಡಲಿನಲ್ಲಿ
ತೆರೆಗಳ ಹಾಗೆ ಕಷ್ಟ ಬರಲು
ಚೇತನವನು ಜೀವಿತದಿ
ಸದಾ ನೀ ಪಾಲಿಸು ಸ್ವಾಮಿ
೨. ಕುರುಡನ ಹಾಗೆ ನಡೆಯುತ್ತಿರಲು
ದಾರಿಯ ಕಾಣದೆ ಬಳಲಿರಲು
ನಿನ್ನಯ ದೊಣ್ಣೆ ಕೋಲುಗಳಿಂದ
ಸದಾ ನೀ ನಡಿಸು ಸ್ವಾಮಿ