ಎನ್ನಲ್ಲಿ ಉಕ್ಕುತ್ತೆ ಸ್ತೋತ್ರವು
ಸ್ವಾಮಿ ಎಂದೆAದೂ ನಾ ಹಾಡುವೆ
ಜನಿಸಿದ ದಿನದಿಂದ ಈ ವರೆಗೂ
ರಕ್ಷಿಸಿ ಕಾದಿ ನೀ
೧. ಆಕಾಶ ಮಂಡಲವೆಲ್ಲಾ
ಸಕಲ ದೇವದೂತ ಸೈನ್ಯವು
ಭೂಚರ ಜಲಚರಗಳಾವು
ಸೃಷ್ಟಿಕರ್ತನ ಕೀರ್ತಿಸಲು
೨. ನಿನ್ನಯ ಅತಿಶ್ರೇಷ್ಟ ನಾಮ
ಅದು ನನಗೆಂಥ ಉಲ್ಲಾಸವು
ನಿನ್ನಯ ನಾಮವ ನಂಬಿ
ಎನಗುAಟು ಅಭಯವೂ
೩. ಆತನ ಪ್ರೀತಿಯ ಕಂಡೆ
ಆ ಕಲ್ವಾರಿ ಶಿಲುಬೆಯಲ್ಲಿ
ಹೃದಯದ ಭಾರವ ಕಳೆದೆ
ನಾ ನೋಡಿದ ಕ್ಷಣದಿಂದಲೇ