೧. sಏನ್ ಕಷ್ಟ ಪ್ರಯಾಸವು ತೀರಲು
ಇಹದ ಪ್ರಯಾಣ ಮುಗಿಯಲು
ಶ್ರೀ ಯೇಸುವಿನ ಮುಖವ ನೋಡ್ವೆ
ಮರೆವೆನೆಲ್ಲಾ ಏನ್ ದುಃಖ ಚಿಂತೆ.
ಪಲ್ಲವಿ
ಮಹಿಮೆಯು ಏನ್ ಭಾಗ್ಯವು
ಮಹಿಮೆಯು ಸಿಗುವದು
ಇಹದ ಕಷ್ಟ ಪ್ರಯಾಸ ತೀರಲು
ನನಗೆ ಮಹಿಮೆ ಕರ್ತ ಕೊಡ್ವನು.
೨. ಶ್ರಮೆಯ ನಂತರ ಮಹಿಮೆಯದೆ
ಕಷ್ಟದ ನಂತರ ಸುಖವದೆ
ದುಃಖದ ನಂತರ ಹರ್ಷವದೆ
ಕತ್ತಲೆ ನಂತರ ಬೆಳಕದೆ.
೩. ಆ ನಾಮ ನಿಮಿತ್ತ ತಾಳುವೇನು
ಇಹದ ನಿಂದೆ ದೂಷಣೆಗಳು
ಆ ನಾಮ ನಿಮಿತ್ತ ತಾಳುವೇನು
ಈ ಕಷ್ಟ ಪ್ರಯಾಸಗಳೆಲ್ಲವು.