ಎನ್ ಪ್ರಾಣ ಪ್ರೀಯನೆ ಯೇಸು ರಾಜಾ

ಎನ್ ಪ್ರಾಣ ಪ್ರೀಯನೆ ಯೇಸು ರಾಜಾ
ಅರ್ಪಿಸುವೆ ಎನ್ ಹೃದಯಾರ್ಪಣೆ
ಕುಗ್ಗಿದ ಜಜ್ಜಿದ ಆತ್ಮದಿಂದ
ಹೃದಯ ಪೂರ್ವಕ ಆರಾಧನೆಯ
ಸತ್ಯದಿಂದ

೧. ಅದ್ಭುತ ಸ್ವರೂಪ ಆಲೋಚಕನೆ
ಆಶ್ಚರ್ಯ ಸಮಾಧಾನ ಪ್ರಭು
ಬಲವುಳ್ಳವನೆ ಬಹು ಪ್ರಿಯನೆ
ಮನೋಹರನೆ ಮಹಿಮಾ ರಾಜಾ ಸ್ತುತಿಸುವೆ

೨. ವಿಮೋಚನೆಯ ಗಾನದಿಂದ
ಸೌAದರ್ಯ ಪ್ರೇಮ ಸ್ತುತಿಯಿಂದ
ನಮಸ್ಕರಿಸಿ ಆರಾಧಿಸುವೆ ಹರ್ಷಿಸುವೆ
ನಾ ಹಾಡುವೆನು ಎನ್ ಕರ್ತನೆ

೩. ಗರ್ಭದಿಂದ ಹುಟ್ಟಿದ ಶಿಶುವ
ಕರುಣಿಸದೆ ತಾಯಿ ಮರೆತರೂ
ಮರೆತರು ಸರಿ ನೀನೇಂದಿಗೂ
ಮರೆಯದೆ ತೊರೆಯದೆ ಕಾಪಾಡುವಿ
ಕರುಣ ರಾಜಾ

೪. ನಿನ್ ನೀತಿಯ ರಕ್ಷಣೆ ಕಾರ್ಯವ
ತುಟಿಗಳು ಎಂದಿಗೂ ಪ್ರಕಟಿಸುವದು
ಕೃತಜ್ಞತಾ ಸ್ತುತಿಗಳಿಂದ ನಿನ್ ಪ್ರೀತಿಯ
ನಾ ವಿವರಿಸುವೆ ವಿಮೋಚಕನೆ

೫. ವಾಗ್ದಾನವ ನೆರೆವೇರಿಸಿದಿ
ವಿಮೋಚಿಸಿ ನಂಗೆ ಕೊಟ್ಟಿರುವಿ
ಹಾಡುವೆನು ಸ್ತುತಿಸುವೆನು
ನಂಬಿಗಸ್ಥನು ನೀನಾಗಿರುವಿ ಹಲ್ಲೆಲೂಯ