೧. ಎನ್ನಾತ್ಮವೇ ಸ್ತೋತ್ರ ಮಾಡು
ಯೇಸುರಾಜ ಎದ್ದನು
ಮರಣದ ಕೊಂಡಿ ಆತ
ಪೂರ್ಣವಾಗಿ ಮುರಿದ
ಹಲ್ಲೆಲೂಯಾ ಸ್ತೋತ್ರ ಮಾಡು
ಯೇಸುರಾಜ ಎದ್ದನು
೨. ನನ್ನ ಪಾಪ ಭಾರವೆಲ್ಲ
ಶಿಲ್ಬೆಯಲ್ಲಿ ಹೊತ್ತನು
ಪರಿಶುದ್ಧ ರಕ್ತವನ್ನು
ಕ್ರಯವಾಗಿ ಕೊಟ್ಟನು
ಹಲ್ಲೆಲೂಯಾ, ಸ್ತೋತ್ರ ಮಾಡು
ಯೇಸು ಶಾಪ ತಾಳಿದ
೩. ಭಕ್ತಜನ ಸಮೂಹವು
ಆತನ್ ಮಾತಿನಂತೆಯೆ
ತುತೂರಿಯ ಶಬ್ಧ ಕೇಳಿ
ಮಧ್ಯಾಕಾಶ ಸೇರ್ವರು
ಹಲ್ಲೆಲೂಯಾ, ಸ್ತೋತ್ರ ಮಾಡು
ಯೇಸುರಾಜ ಬರುವ
೪. ಮರಣ ಸಮಾಧಿಗಳೆ
ನಿಮ್ಮ ಜಯವೆಲ್ಲಿದೆ?
ಎಂದು ಹರ್ಷಚಿತ್ತರಾಗಿ
ಭಕ್ತರೆಲ್ಲ ಹೇಳ್ವರು
ಹಲ್ಲೆಲೂಯಾ ಸ್ತೋತ್ರ ಮಾಡು
ಯೇಸು ಜಯ ಹೊಂದಿದ À