ಎಲ್ ಷಡಾಯ್ ನನ್ನ ಜೊತೆ ನೀನೇ
ನನ್ನ ಬಾಳಿನ ಕೋಟೆಯು
ಏನೆಲ್ಲಾ ಅದ್ಭುತ ನನ್ನ ಬಾಳಲಿ ಮಾಡಿದೆ
ನನ್ನ ಬಾಳಿನ ಬಲ ನೀನೆ
೧. ಮುಂಜಾನೆಯಲ್ಲಿ ಕೃಪೆಯ ಸುರಿಸುವ ಕೃಪೆಗೆ ಸ್ತೋತ್ರವು
ನಿನ್ನ ನಾಮ ನನಗೆ ಪ್ರೀಯ
ನಿನ್ನ ಹಸ್ತವೆ ಆಶ್ರಯ
೨. ಇದುವರೆಗೂ ಕಾಯ್ದು ನಡಿಸಿದ
ಎಬಿನೆಜರನೇ ಸ್ತೋತ್ರ
ಎಲ್ಲಾ ದಿನವು ಜೊತೆಯಲ್ಲಿರುವ
ಇಮ್ಮಾನುವೇಲನೇ ಸ್ತೋತ್ರವು
೩. ಯೆಹೋವ ರಾಫಾ ಎಲ್ಲ ದಿನವು
ನಮ್ಮ ಪರಿಹಾರ
ಎಲ್ಲಾ ದಿನವು ಜಯವ ಕೊಡುವ
ಯೆಹೋವ ನಿಸ್ಸೀಯೇ ಸ್ತೋತ್ರವು
೪. ಯೆಹೋವ ಯೀರೆ ನನ್ನ ಅಗತ್ಯವ
ನೋಡಿ ಕೊಳ್ಳುವಿರಿ
ನನ್ನ ಬಾಳಿನ ಸಮಾಧಾನವೆ
ಯೆಹೋವ ಶಾಲೋಮ್ ಸ್ತೋತ್ರವು