ಎಲ್ಲಾ ಒಳ್ಳೇದೆ ಆಗುವುದು ದೇವಾ ನಿನ್ನ ಪ್ರೀತಿಸಿದ ನನಗೆ
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ
ಮನಸ್ಸು ಊಹಿಸಲಿಲ್ಲ
ನೀ ನನಗಾಗಿಟ್ಟಿದನ್ನು
೧. ಗಾಢಾಂಧಕಾರದಲ್ಲಿ ನಾ ನಡೆದರು ಬೆಂಕಿಯಲ್ಲಿ ಹಾಕಲ್ಪಟ್ಟರು
ನಿನ್ನ ಜೊತೆ ಎಂದು ಇರುವೆ ದೇವ
ನಿನ್ ವಾಗ್ದಾನವು ನನ್ನಲ್ಲಿ ನೆರವೇರುವವು
೨. ಬಂಧು ಮಿತ್ರರು ನನ್ನ ಕೈ ಬಿಟ್ಟರು
ಆತ್ಮೀಯರು ನನ್ನ ದೂಷಿಸಿದರು
ನಿನ್ನ ಕೃಪೆ ನನಗೆ ಸಾಕು ದೇವಾ
ನಿನ್ ವಾಗ್ದಾನ ನನ್ನಲ್ಲಿ ನೆರವೇರುವುದು