ಎಲ್ಲಾ ಕಾಲದೊಳು

ಎಲ್ಲಾ ಕಾಲದೊಳು
ಎಲ್ಲಾ ವೇಳೆಯೊಳು
ದೇವರೇ ನಿನ್ನನ್ನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ
ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ

೧. ಆದಿಯು ನೀನೇ
ಅಂತ್ಯವು ನೀನೇ
ಜ್ಯೋತಿಯು ನೀನೇ
ನನ್ನ ಭಾಗ್ಯವು ನೀನೇ

೨. ಮಾನವು ನೀನೇ
ದಾನವು ನೀನೇ
ಪಾನವು ನೀನೇ
ನನ್ನ ಧ್ಯಾನವು ನೀನೇ

೩. ತಂದೆಯು ನೀನೇ
ತಾಯಿಯು ನೀನೇ
ಬಂಧುವು ನೀನೇ
ನನ್ನ ಆಶ್ರಯ ನೀನೇ

೪. ಮಾರ್ಗವು ನೀನೇ
ಸತ್ಯವು ನೀನೇ
ಜೀವವು ನೀನೇ
ನಂಬಿಗಸ್ತನು ನೀನೇ

೫. ಈ ಲೋಕದೊಳ್ ನೀನೇ
ಮೇಲ್ಲೋಕದೊಳ್ ನೀನೇ
ಉಲ್ಲಾಸದೊಳ್ ನೀನೇ
ಮಹಾ ಕಷ್ಟದೊಳ್ ನೀನೇ

೬. ಸಹಾಯವೂ ನೀನೇ
ಸಂತೋಷವೂ ನೀನೇ
ಶಾಂತಿಯು ನೀನೇ
ವಿಶ್ರಾಂತಿಯು ನೀನೆ